29 ವರ್ಷಗಳ ಹಿಂದೆ 1992, ಮಾರ್ಚ್ 30ರ ಇದೇ ದಿನ ಭಾರತದ ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್ ರೇ ಅವರಿಗೆ ಆಸ್ಕರ್ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಅನಾರೋಗ್ಯದಿಂದ ರೇ ಅವರು ಕೊಲ್ಕೊತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದ ರೇ ಅವರು ಕೈಲಿ ಆಸ್ಕರ್ ಪ್ರಶಸ್ತಿ ಹಿಡಿದು ಅಕಾಡೆಮಿಗೆ ಧನ್ಯವಾದ ಸಮರ್ಪಿಸಿದ್ದರು. ಆಸ್ಕರ್ ಕಮಿಟಿಯವರು ಮಾರ್ಚ್ 16ರಂದು ಕೊಲ್ಕೊತ್ತಾಗೆ ಧಾವಿಸಿ ಆಸ್ಪತ್ರೆಯಲ್ಲಿದ್ದ ರೇ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದರು. ರೇ ಅವರ ಮಾತುಗಳನ್ನೂ ಅಂದೇ ರೆಕಾರ್ಡ್ ಮಾಡಲಾಗಿತ್ತು. ರೇ ಅವರ ಸಿನಿಮಾ ಪ್ರೀತಿ ಮತ್ತು ಪ್ರಶಸ್ತಿಗೆ ಧನ್ಯವಾದ ಅರ್ಪಿಸಿದ ಮಾತುಗಳನ್ನು ಮಾರ್ಚ್ 30ರಂದು 64ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರಸಾರ ಮಾಡಲಾಯ್ತು. ಅಂದು ಕಾರ್ಯಕ್ರಮದಲ್ಲಿ ಖ್ಯಾತ ಹಾಲಿವುಡ್ ತಾರೆ ಆಡ್ರೆ ಹಿಪ್‌ಬರ್ನ್ ಅವರು ಸತ್ಯಜಿತ್ ರೇ ಅವರನ್ನು ಪರಿಚಯಿಸಿದ್ದರು. ಈ ಅಪರೂಪದ ವೀಡಿಯೋ ಇಲ್ಲಿದೆ ನೋಡಿ.

ಮೊದಲ ಭೇಟಿಯಲ್ಲಿ ಲತಾ, ಕಿಶೋರ್ಗೆ ‘ಸ್ಕೌಂಡ್ರಲ್’ ಎಂದು ಬೈದಿದ್ದರಂತೆ!
ಬರಹ: ಚಿತ್ರಾ ಸಂತೋಷ್ ಅದು 1940ರ ಸುಮಾರು. ಆ ಯುವಕ ಲೋಕಲ್ ಟ್ರೇನು