ಭಾರತೀಯ ಸಿನಿಮಾ ಕಂಡ ಅಪರೂಪದ ನಟ ಡಾ.ರಾಜಕುಮಾರ್. ಅವರು ಅಗಲಿ ನಾಳೆಗೆ (ಏಪ್ರಿಲ್ 12) ಹದಿನೈದು ವರ್ಷ. ವೈವಿಧ್ಯಮಯ ಪಾತ್ರಗಳ ಮೂಲಕ ಬೆಳ್ಳಿತೆರೆಯನ್ನು ಅಲಂಕರಿಸಿದ ರಾಜ್ ಸಿನಿಪ್ರೇಮಿಗಳು ಸದಾ ಸ್ಮರಿಸುವ ಚೇತನ. ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ರಾಜಕುಮಾರ್ ಅವರೊಂದಿಗೆ ಒಡನಾಡಿದವರು. ರಾಜ್ ಅಭಿನಯದ ಸಿನಿಮಾಗಳ ಫೋಟೋಗಳ ಸಂಗ್ರಹ ಅವರಲ್ಲಿದೆ. ಅವರು ವಿಭಾಗಿಸಿದಂತೆ ರಾಜ್ ಸಿನಿಮಾಗಳ ಪಟ್ಟಿ ಇಲ್ಲಿದೆ.
ರಾಜಕುಮಾರ್ ಅಭಿನಯಿಸಿದ ಒಟ್ಟು ಸಿನಿಮಾಗಳ ಸಂಖ್ಯೆ 212. ‘ಪ್ರಹ್ಲಾದ’ (1942) ಚಿತ್ರದಲ್ಲಿ ಅವರು ಬಾಲನಟನಾಗಿ, 1952ರಲ್ಲಿ ತೆರೆಕಂಡ ‘ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ನಾಯಕನಟನಾಗಿ ಅಭಿನಯಿಸಿದ ‘ಬೇಡರ ಕಣ್ಣಪ್ಪ’ ತೆಲುಗು ಅವತರಣಿಕೆ ‘ಕಾಳಹಸ್ತಿ ಮಹಾತ್ಯಂ’ ಅವರು ನಟಿಸಿದ ಏಕೈಕ ಪರಭಾಷಾ ಸಿನಿಮಾ. ಈ ಮೂರು ಚಿತ್ರಗಳನ್ನು ಹೊರತುಪಡಿಸಿದರೆ ರಾಜಕುಮಾರ್ ನಾಯಕನಟನಾಗಿ ಕಾಣಿಸಿಕೊಂಡ ಚಿತ್ರಗಳು 209.
- ಪೌರಾಣಿಕ ಹಿನ್ನೆಲೆ ಆಧಾರಿತ ಚಿತ್ರಗಳು – 20
- ಭಕ್ತಿಪ್ರಧಾನ ಚಿತ್ರಗಳು – 12
- ಜಾನಪದ ಕಥೆಗಳ ಆಧಾರಿತ ಚಿತ್ರಗಳು – 21
- ಸಂತರ ಜೀವನ ಆಧಾರಿತ ಚಿತ್ರಗಳು – 8
- ಐತಿಹಾಸಿಕ ಚಿತ್ರಗಳು – 7
- ಕಾದಂಬರಿ ಆಧಾರಿತ ಹಾಗೂ ಕಾದಂಬರಿಕಾರರು ರಚಿಸಿಕೊಟ್ಟ ಕಥೆಗಳನ್ನು ಆಧಾರಿಸಿದ ಚಿತ್ರಗಳು – 28
- ಬಾಂಡ್ ಹಾಗೂ ಇತರೆ ಸಾಮಾಜಿಕ ಕಥೆಗಳ ಚಿತ್ರಗಳು – 113
ಹೀಗೆ, ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ಜಗತ್ತಿನ ಏಕೈಕ ನಟ ರಾಜಕುಮಾರ್ ಎಂದರೆ ಅತಿಶಯೋಕ್ತಿಯಾಗದು.
