ಹಿಚ್‌ಕಾಕ್‌ನಂಥವರು ಚಿತ್ರಕತೆಗೆ ತುಂಬಾ ಮಹತ್ವ ಕೊಟ್ಟಿದ್ದಾರೆ. 'ಚಿತ್ರಕತೆ ಮುಗಿದಾಗ ನನ್ನ ಚಿತ್ರವೂ ಮುಗಿದಂತೆ' ಎಂದು ಹಿಚ್‌ಕಾಕ್ ಹೇಳಿದರೆ, ಆಂಟನಿಮಾನ್ ಅಭಿಪ್ರಾಯ 'ಚಿತ್ರಕತೆಯು ಕೇವಲ ಪ್ರಾರಂಭ.'
ಬರಗೂರು ರಾಮಚಂದ್ರಪ್ಪ
ಸಾಹಿತಿ
ನಮ್ಮ ಕಾಲ ಸುವರ್ಣಯುಗ. ಟೆಕ್ನಾಲಜಿಯ ಲಭ್ಯತೆ ಇಲ್ಲದ ಆಗ ನಮ್ಮ ಕೆಲಸಕ್ಕೆ ಹೆಚ್ಚು ಬೆಲೆ ಸಿಗುತ್ತಿದ್ದುದು ಹೌದು. ಸಿನಿಮಾ ಕಲಾವಿದರ ಜೊತೆ ತಂತ್ರಜ್ಞರಿಗೂ ಸ್ಟಾರ್‌ವ್ಯಾಲ್ಯೂ ಇರುತ್ತಿತ್ತು.
ಬಿ. ಎಸ್. ಬಸವರಾಜ್
ಹಿರಿಯ ಸಿನಿಮಾ ಛಾಯಾಗ್ರಾಹಕ
ಆರಂಭದಲ್ಲಿ ಜೀವನಕ್ಕಾಗಿ ನಟಿಸಿದೆವೇನೋ? ನಂತರ ನಟನೆಯೇ ಜೀವನವಾಯ್ತು. ಕನ್ನಡ ಚಿತ್ರರಂಗಕ್ಕೆ ನನ್ನದೂ ಒಂದಿಷ್ಟು ಅಳಿಲು ಸೇವೆ ಸಂದಿದೆ ಎನ್ನುವ ಧನ್ಯತೆ ಇದೆ, ಅಷ್ಟು ಸಾಕು.
ಬಿ. ಜಯಾ
ಹಿರಿಯ ನಟಿ
‘ಆಕ್ಸಿಡೆಂಟ್’ ಚಿತ್ರದಲ್ಲಿನ ಅಪಘಾತ ಸಂಭವಿಸಿದ ಕ್ಷಣದ ಒಂದು ದೃಶ್ಯ. ನಿರ್ದೇಶಕ ಶಂಕರ್‌ನಾಗ್ ಆ ದೃಶ್ಯವನ್ನು ಅದೆಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ ಅಂದರೆ ಈ ಕ್ಷಣವೂ ಅದು ನನ್ನ ಕಣ್ಮುಂದೆ ನಡೆದಿದೆಯೇನೋ ಅನಿಸುತ್ತದೆ!