ಹಿಂದಿ ಚಿತ್ರರಂಗದ ಪ್ರತಿಷ್ಠಿತ ಕಪೂರ್ ಕುಟುಂಬದಲ್ಲಿ ಹೋಳಿ ಹಬ್ಬದ ಆಚರಣೆಗೆ ವಿಶೇಷ ಮಹತ್ವವಿದೆ. ಹಲವು ಹಿಂದಿ ತಾರೆಯರು ಕಪೂರ್ ಕುಟುಂಬದೊಂದಿಗೆ ಹೋಳಿ ಆಚರಣೆಯಲ್ಲಿ ತೊಡಗುವುದು ದಶಕಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಬಾಲಿವುಡ್‌ನ ಇತರೆ ತಾರಾಕುಟುಂಬಗಳೂ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಹೋಳಿ ಆಚರಣೆ ಮಾಡುವುದನ್ನು ನೋಡಬಹುದು. ಹಲವಾರು ಹಿಂದಿ ಸಿನಿಮಾಗಳಲ್ಲಿ ಹೋಳಿ ಹಾಡುಗಳು ಚಿತ್ರಕಥೆಯೊಂದಿಗೆ ಹಾಸುಹೊಕ್ಕಾಗಿವೆ. ಕುಟುಂಬದ ಎಲ್ಲರೂ ಸಂಭ್ರಮಿಸುವ, ಬಣ್ಣ ಎರಚುತ್ತಾ ನಾಯಕಿಯನ್ನು ಕೆಣಕುವ ಈ ಹಾಡುಗಳು ಬಹುಜನಪ್ರಿಯವಾಗಿವೆ. ಅಂತಹ ಆಯ್ದ ಕೆಲವು ಜನಪ್ರಿಯ ಹಿಂದಿ ಸಿನಿಮಾ ವಿಡಿಯೋ ಹಾಡುಗಳು ಇಲ್ಲಿವೆ.

ಮೊದಲ ಭೇಟಿಯಲ್ಲಿ ಲತಾ, ಕಿಶೋರ್ಗೆ ‘ಸ್ಕೌಂಡ್ರಲ್’ ಎಂದು ಬೈದಿದ್ದರಂತೆ!
ಬರಹ: ಚಿತ್ರಾ ಸಂತೋಷ್ ಅದು 1940ರ ಸುಮಾರು. ಆ ಯುವಕ ಲೋಕಲ್ ಟ್ರೇನು