ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ ಸನ್ನಿವೇಶವನ್ನು ಸೆರೆಹಿಡಿದಿದ್ದರು. ಸಹ ನಿರ್ದೇಶಕ ಪಿ.ಎಚ್.ವಿಶ್ವನಾಥ್, ಛಾಯಾಗ್ರಾಹಕ ಎಸ್‌.ಮಾರುತಿರಾವ್‌ ಇತರರು ಚಿತ್ರದಲ್ಲಿದ್ದಾರೆ. ಕನ್ನಡ ಬೆಳ್ಳಿತೆರೆಯಲ್ಲಿ ತಮ್ಮ ವಿಶಿಷ್ಠ ಛಾಪು ಮೂಡಿಸಿದ ಪುಟ್ಟಣ್ಣ ಕಣಗಾಲ್‌ (01/12/1933 – 05/06/1985) ಅವರ ಜನ್ಮದಿನವಿಂದು (ಡಿಸೆಂಬರ್‌ 1). (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ ದಿನಗಳಲ್ಲಿ ವಿಕ್ರಂ ಸ್ಟುಡಿಯೋ ಸ್ಥಾಪಿಸಿ, ಕನ್ನಡ ಚಿತ್ರಗಳ ನಿರ್ಮಾಣ, ನಿರ್ದೇಶನದೊಂದಿಗೆ ತಾಯ್ನೆಲದಲ್ಲಿ ಚಿತ್ರರಂಗ ನೆಲೆಯೂರುವಲ್ಲಿ ನೆರವಾದ ತಂತ್ರಜ್ಞರಲ್ಲೊಬ್ಬರು. ಕಾಲೇಜು ದಿನಗಳಲ್ಲೇ ಛಾಯಾಗ್ರಹಣದತ್ತ ಆಸಕ್ತರಾಗಿದ್ದ ಅವರು ಮುಂಬಯಿಯಲ್ಲಿ ಖ್ಯಾತ ಛಾಯಾಗ್ರಾಹಕ ಕೃಷ್ಣಗೋಪಾಲ್ ಅವರಲ್ಲಿ ಸಹಾಯಕರಾಗಿ ಅನುಭವ ಪಡೆದರು. ಮುಂದೆ ಮದರಾಸಿನ ಜೆಮಿನಿ ಸ್ಟುಡಿಯೋದಲ್ಲಿ ಕೆಲಸ ಮಾಡಿದ ಅವರು ಸ್ವತಂತ್ರ್ಯವಾಗಿ ಛಾಯಾಗ್ರಹಣ ಮಾಡಿದ್ದು ‘ಭಕ್ತ ನಾರದರ್’ ತಮಿಳು ಚಿತ್ರಕ್ಕೆ. […]

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ ಶಂಕರ್‌ನಾಗ್‌ ಪ್ರಯೋಗಶೀಲ ನಿರ್ದೇಶಕರೆಂದು ಗುರುತಿಸಲ್ಪಡುತ್ತಾರೆ. ಅವರು ನಿರ್ದೇಶಿಸಿದ ‘ಮಾಲ್ಗುಡಿ ಡೇಸ್‌’ ಶ್ರೇಷ್ಠ ಹಿಂದಿ ಸರಣಿಗಳಲ್ಲೊಂದು. ರಂಗಭೂಮಿ ಹಿನ್ನೆಲೆಯ ನಟ, ನಿರ್ದೇಶಕ ಶಂಕರ್‌ನಾಗ್‌ ತಮ್ಮ ಪಾದರಸದಂತಹ ವ್ಯಕ್ತಿತ್ವದಿಂದ ಯುವ ಮನಸ್ಸುಗಳಿಗೆ ಮಾದರಿಯಾಗಿದ್ದವರು. 36ರ ಹರೆಯದಲ್ಲಿ ಅಕಾಲಿಕವಾಗಿ ಅವರು ಅಗಲಿದ್ದು ಕನ್ನಡ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಇಂದು ಶಂಕರ್‌ನಾಗ್‌ (09/11/1954 – 30/09/1990) ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ […]

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ – ನಿರ್ಮಾಪಕ ಶೃಂಗಾರ ನಾಗರಾಜ್, ಛಾಯಾಗ್ರಾಹಕ ಕೃಷ್ಣ ಪ್ರಸಾದ್, ನಟಿ ಕಲ್ಪನಾ, ಆರ್‌.ಎನ್‌.ಜಯಗೋಪಾಲ್‌ ಚಿತ್ರದಲ್ಲಿದ್ದಾರೆ. (ಫೋಟೊ – ಮಾಹಿತಿ: ಎನ್‌.ಎಸ್‌.ಶ್ರೀಧರಮೂರ್ತಿ)

ಎಸ್‌.ತಿಪ್ಪೇಸ್ವಾಮಿ – 79

ದಶಕಗಳ ಹಿಂದೆ ಮೈಸೂರು ದಸರಾ ಸಿನಿಮೋತ್ಸವದ ಸಂದರ್ಭ. ತಾರಾ ದಂಪತಿ ಲೋಕೇಶ್ ಮತ್ತು ಗಿರಿಜಾ ಅವರೊಂದಿಗೆ ಸ್ಥಿರಚಿತ್ರ ಛಾಯಾಗ್ರಾಹಕ ಎಸ್‌.ತಿಪ್ಪೇಸ್ವಾಮಿ. ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೋಗ್ರಫಿ ಕಲಿಯುವಾಗ ತಿಪ್ಪೇಸ್ವಾಮಿ ಅವರ ಜ್ಯೂನಿಯರ್‌ ನಟ ಲೋಕೇಶ್‌. ನಾಟಕಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದ ಇವರು ಆಪ್ತ ಸ್ನೇಹಿತರು. ಭಾರತದ ಶ್ರೇಷ್ಠ ವನ್ಯಜೀವಿ ಛಾಯಾಗ್ರಾಹಕರ ಯಾದಿಯಲ್ಲಿ ತಿಪ್ಪೇಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿದೆ. ಹತ್ತಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ತಿಪ್ಪೇಸ್ವಾಮಿ ಅವರು ಫೋಟೊಗ್ರಫಿ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ […]

ನಿರ್ದೇಶಕ ವೈ.ಆರ್.ಸ್ವಾಮಿ ನೆನಪು

ಮದರಾಸಿನ ಸ್ಟೂಡಿಯೋವೊಂದರಲ್ಲಿ ‘ವಾತ್ಸಲ್ಯ’ (1965) ಸಿನಿಮಾ ಚಿತ್ರೀಕರಣದ ಬಿಡುವಿನಲ್ಲಿ ನಟ ರಾಜಕುಮಾರ್, ನಿರ್ದೇಶಕ ವೈ.ಆರ್.ಸ್ವಾಮಿ ಮತ್ತು ನಟ ಉದಯಕುಮಾರ್ ಅವರು ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯನ ಅವರಿಗೆ ಪೋಸು ಕೊಟ್ಟಿದ್ದು ಹೀಗೆ. ಕನ್ನಡ ಚಿತ್ರರಂಗದ ಎರಡನೇ ತಲೆಮಾರಿನ ನಿರ್ದೇಶಕರ ಯಾದಿಯಲ್ಲಿ ಮಹತ್ವದ ಸ್ಥಾನ ಪಡೆದವರು ವೈ.ಆರ್.ಸ್ವಾಮಿ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳ 60ಕ್ಕೂ ಹೆಚ್ಚು ಚಿತ್ರಗಳನ್ನು ಸ್ವಾಮಿ ನಿರ್ದೇಶಿಸಿದ್ದಾರೆ. ಹಲವು ಸಿನಿಮಾಗಳ ಚಿತ್ರಕಥೆ ರಚನೆಕಾರರೂ ಹೌದು. ರೇಣುಕಾ ಮಹಾತ್ಮೆ, ಸ್ವರ್ಣಗೌರಿ, ಮುರಿಯದ ಮನೆ, ಕಠಾರಿವೀರ, ಭಲೇ […]

ಪ್ರಗತಿ – ಕೆ.ಎಸ್‌.ಎಲ್‌.ಸ್ವಾಮಿ

ಬೆಂಗಳೂರು ಗಾಂಧಿನಗರದಲ್ಲಿದ್ದ ‘ಪ್ರಗತಿ’ ಸ್ಟುಡಿಯೋದಲ್ಲಿ ಚಿತ್ರನಿರ್ದೇಶಕ ಬಿ.ನಾಗೇಶ್‌ ಬಾಬ, ನಿರ್ಮಾಪಕ ಚಂದೂಲಾಲ್ ಜೈನ್‌, ನಿರ್ದೇಶಕ ಕೆ.ಎಸ್‌.ಎಲ್‌.ಸ್ವಾಮಿ (ರವೀ), ಸ್ಥಿರಚಿತ್ರ ಛಾಯಾಗ್ರಾಹಕ ಅಶ್ವತ್ಥ ನಾರಾಯಣ ಸಮಾಲೋಚನೆ. ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರನಿರ್ದೇಶಕರಲ್ಲೊಬ್ಬರು ಕೆ.ಎಸ್‌.ಎಲ್‌.ಸ್ವಾಮಿ. ‘ತೂಗುದೀಪ’ (1966) ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾದ ಅವರು ಗಮನಾರ್ಹ ಚಿತ್ರಗಳನ್ನು ನೀಡಿದ್ದಾರೆ. ಅವರ ನಿರ್ಮಾಣ, ನಿರ್ದೇಶನದ ‘ಜಂಬೂ ಸವಾರಿ’ ಅತ್ಯುತ್ತಮ ಮಕ್ಕಳ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದೆ. ಇಂದು ಕೆ.ಎಸ್‌.ಎಲ್‌.ಸ್ವಾಮಿ (21/02/1939 – 20/10/2015) ಅವರ ಸಂಸ್ಮರಣಾ ದಿನ.

ಕುಲಗೌರವಂ – 49

ಪೇಕೆಟಿ ಶಿವರಾಂ ನಿರ್ದೇಶನದ ‘ಕುಲಗೌರವಂ’ ತೆಲುಗು ಸಿನಿಮಾ 19/10/1972ರಂದು ತೆರೆಕಂಡಿತ್ತು. ಎನ್‌ಟಿಆರ್‌ ತ್ರಿಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನಿಮಾ ತೆರೆಕಂಡು ಇಂದಿಗೆ 49 ವರ್ಷ. ಪೇಕೆಟಿ ಶಿವರಾಂ ನಿರ್ದೇಶನದಲ್ಲಿ ರಾಜಕುಮಾರ್ ತ್ರಿಪಾತ್ರದಲ್ಲಿ ನಟಿಸಿದ ‘ಕುಲಗೌರವ’ (1971) ಚಿತ್ರದ ತೆಲುಗು ರೀಮೇಕ್ ಇದು. ಕನ್ನಡ ಚಿತ್ರದಲ್ಲಿ ನಟಿಸಿದ್ದ ಜಯಂತಿ ಮತ್ತು ಭಾರತಿ ಅವರೇ ತೆಲುಗು ಚಿತ್ರದಲ್ಲೂ ಎನ್‌ಟಿಆರ್‌ ಅವರಿಗೆ  ನಾಯಕಿಯರಾಗಿದ್ದರು. (ಮಾಹಿತಿ: ಮೋಹನ್ ಬಾಬು ಬಿ.ಕೆ.)

ಗುಬ್ಬಿ ವೀರಣ್ಣ ನೆನಪು

ಬೆಂಗಳೂರು ಕಂಠೀರವ ಸ್ಟುಡಿಯೋ ಎದುರು ರಂಗದಿಗ್ಗಜ, ಚಿತ್ರಕರ್ಮಿ ಗುಬ್ಬಿ ವೀರಣ್ಣನವರು. ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ ಮಹನೀಯರೊಲ್ಲಬ್ಬರು ಗುಬ್ಬಿ ವೀರಣ್ಣ. ಆರನೇ ವಯಸ್ಸಿನಲ್ಲೇ ರಂಗಕ್ಕೆ ಪಾದಾರ್ಪಣೆ ಮಾಡಿದ ವೀರಣ್ಣ ಗುಬ್ಬಿ ಚನ್ನಬಸವೇಶ್ವರ ಕಂಪನಿಯ ಆಧಾರ ಸ್ತಂಭವಾಗಿ ವೃತ್ತಿರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮೇರು ಸಾಧಕ. ಮೂಕಿ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ಅವರು ಮುಂದೆ ಟಾಕಿ ಯುಗದಲ್ಲೂ ಹಲವು ಪ್ರಯೋಗಗಳೊಂದಿಗೆ ಚಿತ್ರರಂಗಕ್ಕೆ ದುಡಿದರು. ನಟ, ನಿರ್ದೇಶಕ, ನಿರ್ಮಾಪಕ, ವಿತರಕ, ಚಿತ್ರಪ್ರದರ್ಶಕರಾಗಿ ವಿವಿಧ ವಿಭಾಗಗಳಲ್ಲಿ […]

ಆರ್‌ಎನ್‌ಜೆ – ಚಿ.ಉದಯಶಂಕರ್ – ವಿಜಯನಾರಸಿಂಹ

(ಫೋಟೊ – ಬರಹ: ಎನ್‌.ಎಸ್‌.ಶ್ರೀಧರಮೂರ್ತಿ) ಕನ್ನಡ ಚಿತ್ರಗೀತೆಗಳ ‘ರತ್ನತ್ರಯರು’ ಎಂದೇ ಕರೆಯಬಹುದಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಮೂವರೂ ಒಟ್ಟಿಗೆ ಇರುವ ಅಪರೂಪದ ಪೋಟೋ ಇದು. ಈ ಫೋಟೊ ಸೆರೆಯಾದ ಸಂದರ್ಭ ಕೂಡ ವಿಶಿಷ್ಟವಾದದ್ದೇ. 1967ರಲ್ಲಿ ಬಿ.ಎ.ಅರಸ್ ಕುಮಾರ್ ತಮ್ಮದೇ ಪ್ರಸಿದ್ದ ನಾಟಕ ‘ಅಭಾಗಿನಿ’ಯನ್ನು ‘ಬಂಗಾರದ ಹೂವು’ ಶೀರ್ಷಿಕೆಯಡಿ ಚಿತ್ರವಾಗಿಸಲು ನಿರ್ಧರಿಸಿದರು. ಅವರಿಗೆ ಬೆಂಬಲವಾಗಿ ನಿಂತವರು ಅವರ ಬಾಲ್ಯದ ಸಹಪಾಠಿ ಚಿ.ಉದಯಶಂಕರ್. ಅವರ ನೆರವಿನಿಂದಲೇ ರಾಜ್ ಕುಮಾರ್, ಕಲ್ಪನಾ, ಶೈಲಶ್ರೀ, ಉದಯ ಕುಮಾರ್, ಬಾಲಕೃಷ್ಣ, ನರಸಿಂಹರಾಜು ಎಲ್ಲರೂ […]